Anil Kumble, a former cricketer of the Indian cricket team, spin wizard, proud of the cricket world, tweeted about Kannada cinema. Anil Kumble in a reply tweet said last Kannada film he watched was Hebballi starring Kichcha Sudeepa and he liked the Sudeep's acting very much.
ಕ್ರಿಕೆಟ್ ಲೋಕದ ದಿಗ್ಗಜ, ಟೀಂ ಇಂಡಿಯಾದ ಮಾಜಿ ನಾಯಕ, ಸ್ಪಿನ್ ಮಾಂತ್ರಿಕ, ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ ಅವರು ಕನ್ನಡ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸೆ.18ರಂದು ದಿವಂಗತ ಡಾ. ವಿಷ್ಣುವರ್ಧನ್ ಅವರ ಜನ್ಮದಿನೋತ್ಸವವನ್ನು ಸ್ಮರಿಸಿ, ಕುಂಬ್ಳೆ ಅವರು ಟ್ವೀಟ್ ಮಾಡಿದ್ದರು. ವಿಷ್ಣು ಅವರನ್ನು ಸ್ಮರಿಸಿ ಟ್ವೀಟ್ ಮಾಡಿದ ಅನಿಲ್ ಕುಂಬ್ಳೆ ಅವರಿಗೆ ಸಾರ್ವಜನಿಕರೊಬ್ಬರು ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ನೀವು ಕೊನೆ ಬಾರಿಗೆ ನೋಡಿದ ಕನ್ನಡ ಸಿನಿಮಾ ಯಾವುದು? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕುಂಬ್ಳೆ, ಹೆಬ್ಬುಲಿ ಇತ್ತೀಚೆಗೆ ನೋಡಿದ ಚಿತ್ರ ಹಾಗೂ ನನಗೆ ಸುದೀಪ್ ಅಭಿನಯ ತುಂಬಾ ಇಷ್ಟ ಎಂದಿದ್ದಾರೆ.