ಬೀದರ್‌ನಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನ್ನದಾತರು ಕಣ್ಣೀರು ಹಾಕ್ತಿದ್ದಾರೆ. ಬೀದರ್ ತಾಲೂಕು ಸೇರಿದಂತೆ ಭಾಲ್ಕಿ, ಹುಮ್ನಾಬಾದ್ ನಲ್ಲಿ ಸೋಯಾ, ಅವರೆ, ಹೆಸರು, ತೊಗರಿ, ಕಬ್ಬು, ಭತ್ತ ಸೇರಿದಂತೆ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ವಿವಿಧ ಫಸಲುಗಳಲ್ಲಿ ೪ರಿಂದ ೫ ಅಡಿಯಷ್ಟು ನೀರು ನಿಂತು ಬೆಳೆಗಳು ಕೊಳೆತು ಸಂಪೂರ್ಣ ಹಾನಿಯಾಗಿದೆ. ಇಷ್ಟಾದ್ರೂ ಕೂಡ ಸ್ಥಳಕ್ಕೆ ಭೇಟಿ ನೀಡದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ದ ರೈತರು ಹಿಡಿಶಾಪ ಹಾಕುತ್ತಿದ್ದಾರೆ.
#publictv #raineffect #bidar