ಇದು ಶ್ರಾವಣಮಾಸ.. ಜೊತೆಗೆ ನಾಳೆಯಿಂದ ಆಗಸ್ಟ್ 15ರವರೆಗೆ ಹಲವು ರಾಜ್ಯಗಳಲ್ಲಿ ಸತತ ರಜೆಗಳು ಇವೆ.. ಹೀಗಾಗಿ ತಿರುಪತಿ ತಿರುಮಲಕ್ಕೆ ಅಧಿಕ ಸಂಖ್ಯೆ ಭಕ್ತರು ಬರುವ ನಿರೀಕ್ಷೆ ಇದೆ. ಹೀಗಾಗಿ ಭಕ್ತರು ಯಾವುದೇ ಸಿದ್ಧತೆ, ಯೋಜನೆಗಳು ಇಲ್ಲದೇ ಈ ಐದು ದಿನ ತಿರುಪತಿಗೆ ಬರಬೇಡಿ ಎಂದು ಟಿಟಿಡಿ ಮನವಿ ಮಾಡಿದೆ. ಮೊದಲೇ ದರ್ಶನದ ಟಿಕೆಟ್ ಬುಕ್ ಆಗಿದ್ರೆ, ಇರಲಿಕ್ಕೆ ವಸತಿ ಸೌಲಭ್ಯವನ್ನು ಮಾಡಿಕೊಂಡಿದ್ರೆ ಮಾತ್ರ ಬನ್ನಿ.. ಇಲ್ಲ ಅಂದ್ರೆ ಬಂದು ಒದ್ದಾಡಬೇಡಿ.. ಚಿಕ್ಕಮಕ್ಕಳು, ವೃದ್ಧರು, ವಿಕಲಾಂಗರು ತಿರುಮಲ ಯಾತ್ರೆಯನ್ನು ಮುಂದೂಡಿ ಎಂದು ಸೂಚಿಸಿದ್ದಾರೆ. ರಷ್ ಜಾಸ್ತಿ ಇದ್ದಲ್ಲಿ ಭಕ್ತರಿಗೆ, ನಿಗದಿತ ಸಮಯದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಸರತಿ ಸಾಲಿನಲ್ಲಿ, ಕಂಪಾರ್ಟ್‍ಮೆಂಟ್‍ಗಳಲ್ಲಿ ತುಂಬಾ ಹೊತ್ತು ಕಾಯಬೇಕಾಗುತ್ತದೆ.. ಎಂದು ಟಿಟಿಡಿ ಎಚ್ಚರಿಸಿದೆ.
#publictv #newscafe #hrranganath