ಅಮೃತ್ ಪೌಲ್ ಆಸ್ತಿ ನೋಡಿ ಸಿಐಡಿಯೇ ಶಾಕ್..! | Amrit Paul | PSI Recruitment Scam

Public TV 2022-07-16

Views 3

ಪಿಎಸ್‍ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿರೋ ಎಡಿಜಿಪಿ ಅಮೃತ್‍ಪೌಲ್ ಮಾಡಿದ್ದ ಆಸ್ತಿ ನೋಡಿ ಸಿಐಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಅಮೃತ್‍ಪೌಲ್ ತಮ್ಮ ತಂದೆ ಹೆಸರಿನಲ್ಲಿ ನೂರಾರು ಕೋಟಿ ಮೌಲ್ಯದ ಜಮೀನು ಮಾಡಿರೋದು ಪತ್ತೆಯಾಗಿದೆ. ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲೇ ಎಲ್ಲಾ ಆಸ್ತಿಯನ್ನ ಮಾಡಿದ್ದಾರೆ ಅಮೃತ್ ಪೌಲ್. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಹೊಸಹುಡ್ಯ ಗ್ರಾಮದಲ್ಲಿ ಸರ್ವೆ ನಂಬರ್ 247ರಲ್ಲಿರೋ 4 ಎಕರೆಯಷ್ಟು ಜಾಗದಲ್ಲಿ ಫಾರ್ಮೌಸ್ ಇದೆ. ಫಾರ್ಮೌಸ್ ಪಕ್ಕದ 8 ಎಕರೆ ಜಮೀನನ್ನ ಕೂಡ ಖರೀದಿ ಮಾಡಿದ್ದಾರೆ
ಶಿಡ್ಲಘಟ್ಟದ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ ಜಮೀನು, ನೆಲಪ್ಪನಹಳ್ಳಿ ಸರ್ವೆ ನಂಬರ್ 49ರಲ್ಲಿ 4 ಎಕರೆ 39 ಗುಂಟೆ ಜಾಗ, ನೆಲಪ್ಪನಹಳ್ಳಿಯಲ್ಲೇ ಎಕರೆ 30 ಗುಂಟೆ ಜಾಗ ಖರೀದಿಸಿರೋದು ಪತ್ತೆಯಾಗಿದೆ. ಹರಿಯಾಣದಲ್ಲಿ 2 ಮನೆ, ತಂದೆ ಹೆಸರಲ್ಲಿ ಜಮೀನು ಇದೆ. ಸದ್ಯ ಅಮೃತ್ ಪೌಲ್ ಬ್ಯಾಂಕ್ ಡಿಟೇಲ್ಸ್, ಆಸ್ತಿ ವಿವರವನ್ನು ಸಿಐಡಿ ಪೊಲೀಸರು ಪರಿಶೀಲಿಸುತ್ತಿದ್ದಾರೆ.

#publictv #amritpaul #psirecruitmentscam

Share This Video


Download

  
Report form
RELATED VIDEOS