ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಮೃತ್ ಪಾಲ್ ಬಂಧನ ಆಗಿದ್ದು ಯಾಕೆ ಎಂಬ ಎಕ್ಸ್‍ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಅದೇ ಒನ್ ಟೈಂ ಲಾಕರ್ ಅಸಲಿತ್ತಿನ ಸ್ಟೋರಿ. ಯಾವುದಾದರೂ ಪರೀಕ್ಷೆ ನಡೆದ್ರೆ ಪರೀಕ್ಷಾ ಮೇಲುಸ್ತುವಾರಿ ಅಧಿಕಾರಿ ಎಲ್ಲಾ ಉತ್ತರ ಪತ್ರಿಕೆಯನ್ನು ಸಂಗ್ರಹಿಸ್ತಾನೆ. ಬಳಿಕ, ಕಬ್ಬಿಣದ ಟ್ರಂಕ್‍ನಲ್ಲಿ ಉತ್ತರ ಪತ್ರಿಕೆಯನ್ನು ಇಟ್ಟು ಒನ್ ಟೈಂ ಲಾಕರ್ ಹಾಕ್ತಾನೆ. ಅದಕ್ಕೆ ಒಂದು ನಂಬರ್ ಕೂಡ ಇರುತ್ತೆ.. ಆ ನಂಬರ್ ಅನ್ನು ಪರೀಕ್ಷಾ ಮೇಲುಸ್ತುವಾರಿ ಟ್ರಂಕ್ ಮೇಲೆ ನಮೂದು ಮಾಡ್ತಾನೆ. ಬಳಿಕ ಪರೀಕ್ಷಾ ವಿಭಾಗದ ಸ್ಟ್ರಾಂಗ್ ರೂಂಗೆ ಬರ್ರ್ತವೆ.. ಅದನ್ನೇ ಈ ಗ್ಯಾಂಗ್ ನಕಲು ಮಾಡಿದೆ. ಸಿಸಿಟಿವಿ ಆಫ್ ಮಾಡಿ ಸ್ಟ್ರಾಂಗ್ ರೂಂ ಓಪನ್ ಮಾಡಿ ಉತ್ತರ ಪತ್ರಿಕೆಗಳನ್ನು ತಿದ್ದಲಾಗಿದೆ. ಬಳಿಕ ಅದೇ ನಂಬರ್‍ನ ನಕಲಿ ಒನ್ ಟೈಂ ಲಾಕರ್‍ಗಳನ್ನು ಹಾಕಿದ್ದಾರೆ. ತನಿಖೆಯ ವೇಳೆಯಲ್ಲಿ ಈ ಮಾಹಿತಿ ಬಹಿರಂಗ ಆಗಿರೋದರ ಜೊತೆಗೆ ಡಿವೈಎಸ್ಪಿ ಶಾಂತಕುಮಾರ್ ಮನೆಯಲ್ಲಿ ಒನ್ ಟೈಂ ಲಾಕರ್‍ಗಳು ಕೂಡ ಸಿಕ್ಕಿದ್ದವು. ಇದೆಲ್ಲವೂ ಕೂಡ ಎಡಿಜಿಪಿ ಮಾಸ್ಟರ್ ಮೈಂಡ್‍ನಿಂದಲೇ ನಡೆದಿದ್ದು ಎಂದು ಶಾಂತಕುಮಾರ್ ಸಿಐಡಿ ಮುಂದೆ ಮಾಹಿತಿ ಬಿಚ್ಚಿಟ್ಟಿದ್ದು, ಅಮೃತ್‍ಪೌಲ್ ಬಂಧನಕ್ಕೆ ಇದು ಒಂದು ಕಾರಣವಾಗಿದೆ.
#publictv #newscafe #hrranganath