ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಬಿಹಾರ ಹಿಂಸಾಚಾರದ ಕೇಂದ್ರವಾಗಿದೆ. ಈವರೆಗೆ 15ಕ್ಕೂ ಹೆಚ್ಚು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಇವತ್ತೂ ಕೂಡ ಹಿಂಸಾಚಾರ ನಡೆಯುವ ಎಲ್ಲಾ ಸಾಧ್ಯತೆ ಇದೆ. ಹಾಗಾಗಿ, ಹಿಂಸಾಚಾರ ಪೀಡಿತ ಸಮಷ್ಠಿಪುರ, ಬೆಗುಸರಾಯ್, ಲಖಿಸರಾಯ್, ವೈಶಾಲಿ, ಸರನ್, ರೋಹ್ತಕ್, ಕೈಮುರ್, ಭೋಜ್‍ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂಟರ್ನೆಟ್, ಮೊಬೈಲ್ ಸೇವೆ ಸ್ಥಗಿತಗೊಳಿಸಲಾಗಿದೆ. ಬಿಜೆಪಿ ನಾಯಕರ ಮನೆಗಳನ್ನೇ ಗುರಿಯಾಗಿಸಿ ದಾಳಿ ಮಾಡಲಾಗ್ತಿದೆ. ಹರ್ಯಾಣದಲ್ಲೂ ಇಂಟರ್ನೆಟ್, ಎಸ್‍ಎಂಎಸ್ ಸೇವೆಯನ್ನೂ ಬಂದ್ ಆಗಿದೆ. ಉತ್ತರ ಪದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳಗಳಲ್ಲೂ ಪ್ರತಿಭಟನೆ ಉಗ್ರ ರೂಪ ಪಡೆದಿದೆ. ಹಿಂಸಾಚಾರ ನಿಲ್ಲಿಸುವಂತೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮನವಿಮಾಡಿದ್ದಾರೆ. ಈ ಮಧ್ಯೆ, ಯಾವುದೇ ಕಾರಣಕ್ಕೂ ಅಗ್ನಿಪಥ್ ಯೋಜನೆಯನ್ನು ಕೈಬಿಡೋದಿಲ್ಲ ಅಂತ ಕೇಂದ್ರ ಸರ್ಕಾರ ಪುನರುಚ್ಛರಿಸಿದೆ. ಈ ಬೆನ್ನಲ್ಲೇ ಜೂನ್ 24ರಿಂದ ವಾಯುಪಡೆ ನೇಮಕಾತಿ ಆರಂಭಿಸ್ತಿದೆ.
#publictv #newscafe #hrranganath