'Illegal' Stone Quarrying At Sultanpur Village In Bidar | Public TV
#PublicTV #IllegalStoneQuarry #Bidar
ಇಲ್ಲಿ ಭೂ ಸಂಪತ್ತನ್ನು ಎಗ್ಗಿಲ್ಲದೆ ಲೂಟಿ ಮಾಡಲಾಗ್ತಿದೆ. ಸ್ವಲ್ಪ ದಿನ ಕಳೆದ್ರೇ ಬಳ್ಳಾರಿ ಗಣಿಗಾರಿಕೆಯನ್ನೇ ಮೀರಿಸುವಂತಿದೆ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ರೂ ಯಾರು ಹೇಳೋರು ಕೇಳೋರು ಇಲ್ಲದಂತ್ತಾಗಿದೆ. ಪಬ್ಲಿಕ್ ಟಿವಿ ಕ್ಯಾಮರಾ ಕಂಡೊಡನೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗಡಿ ಜಿಲ್ಲೆ ಬೀದರ್ನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು ಜಿಲ್ಲೆಯ ಭೂ ಸಂಪತ್ತು ಲೂಟಿಯಾಗ್ತಿದೆ. ಬೀದರ್ ತಾಲೂಕಿನ ಸುಲ್ತಾನ್ಪೂರ್ ಗ್ರಾಮದ ಸರ್ವೆ ನಂಬರ್ 28ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಸ್ತಿದ್ದಾರೆ. ಪ್ರತಿದಿನ ಹತ್ತಾರು ಗಾಡಿಗಳಲ್ಲಿ ಸಾವಿರಾರು ಟನ್ ಭೂ ಸಂಪತ್ತನ್ನು ಕೊಳ್ಳೆ ಹೊಡೆದು ಸಾಗಿಸುತ್ತಿದ್ದಾರೆ.
ತೆಲಂಗಾಣ ಗಡಿಯಾದ್ರೂ ಜಿಲ್ಲೆಯ ಮಲ್ಕಾಪೂರೆ ಗ್ರಾಮ ಪಂಚಾಯ್ತಿಯ ಸರ್ವೆ ನಂಬರ್ ೨೮ರಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ಲೂಟಿಕೊರರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಪ್ರತಿದಿನ ಬಾರಿ ಸದ್ದು ಕೇಳಿ ಬರುತ್ತಿದ್ದು ಕಿರಿಕಿರಿಯಾಗುತ್ತಿದೆ ಎಂದು ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ ಸ್ಥಳೀಯರು.
ಅಕ್ರಮದ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ನಿಮ್ಮ ಪಬ್ಲಿಕ್ ಟಿವಿ ಸ್ಥಳಕ್ಕೆ ತೆರಳಿತ್ತು. ಈ ವೇಳೆ ಕಲ್ಲು ಗಣಿಗಾರಿಕೆ ನಡೆಯುವ ಕ್ವಾರಿಗೆ ಹೋಗಿದ್ದಾಗ ಲೂಟಿಕೋರರು ಹೋಲ್ ಹಾಕಿ ಸ್ಫೋಟಕಗಳನ್ನು ಬಳಿಸಿಕೊಂಡು ಬ್ಲಾಸ್ಟ್ ಮಾಡಲು ರೆಡಿ ಮಾಡಿಕೊಂಡಿದ್ದರು... ಆದ್ರೆ ನಾವು ಬರೋ ಮೂನ್ಸೂಚನೆ ಪಡೆದ ಭೂ ಸಂಪತ್ತು ಲೂಟಿಕೊರರು ಅಲ್ಲಿಂದ ಪರಾರಿಯಾಗಿದ್ರು... ಪೈಪಿಂಗ್ ಮಾಡುವ ಯಂತ್ರ ಹಾಗೂ ಗಣಿಗಾರಿಕೆಗೆ ಬೇಕಿರುವ ವಸ್ಥುಗಳನ್ನು ಹೊತ್ತು ಲಾರಿ ಬಿಟ್ಟು ಖದೀಮರು ಮಾಯವಾಗಿ ಬಿಟ್ಟಿದ್ರು..
ಬಂಜರು ಭೂಮಿಯಲ್ಲಿ ಯಾರಿಗೆ ತಿಳಿಯದಂತೆ ಹತ್ತಾರು ಎಕರೆ ಭೂ ಒಡಲನ್ನು ಕೊರೆದು ಅಕ್ರಮ ಗಣಿಗಾರಿಕೆ ಮಾಡಿದ್ದಾರೆ... ಈ ದೃಶ್ಯಗಳನ್ನು ನೋಡಿದ್ರೆ ಅಕ್ರಮ ಗಣಿಗಾರಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇಲ್ಲದೆ ನಡೆಯುತ್ತಿದೆಯಾ ಎಂದು ಪ್ರಶ್ನೆ ಮೂಡುತ್ತಿದೆ... ಅಕ್ರಮ ಗಣಿಗಾರಿಕೆ ಮಾಡುವ ಜಾಗದಿಂದ ಕೂಗಳತೆ ದೂರದ ಸುಲ್ತಾನ್ಪೂರ್ ಗ್ರಾಮದ ಬಳಿ ಇದ್ದು ಗ್ರಾಮಸ್ಥರು ಬಾರಿ ಸದ್ದಿಗೆ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಕ್ರಮ ನಡೆಯುತ್ತಿದ್ರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ಬ್ರೇಕ್ ಹಾಕದೇ ಇರುವುದು ವಿಪರ್ಯಾಸದ ಸಂಗತಿ.