ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ಜಿಎಲ್ಎ ಹೊಸ ತಲೆಮಾರಿನ ಮಾದರಿಯನ್ನು ಪರಿಚಯಿಸಿದೆ. ಇದು ಭಾರತದಲ್ಲಿ ಬ್ರ್ಯಾಂಡ್‌ನ ಪ್ರವೇಶ ಮಟ್ಟದ ಎಸ್‌ಯುವಿ ಆವೃತ್ತಿಯಾಗಿದ್ದು, ವಿನೂತನ ವೈಶಿಷ್ಟ್ಯತೆಗಳೊಂದಿಗೆ ಹೊಸ ಪವರ್‌ಟ್ರೇನ್ ಪಡೆದುಕೊಂಡಿದೆ. ಬ್ರ್ಯಾಂಡ್‌ನ ಪ್ರವೇಶ ಮಟ್ಟದ ಎಸ್‌ಯುವಿ ಮಾದರಿಯ ಕಾರ್ಯಕ್ಷಮತೆ ಕುರಿತಾಗಿ ನಾವು ಇತ್ತೀಚೆಗೆ ಹೊಸ ಕಾರನ್ನು ಒಂದೆರಡು ದಿನಗಳ ಕಾಲ ಚಾಲನೆ ಮಾಡಿದೆವು. ದೀರ್ಘಾವಧಿಯ ಪ್ರಯಾಣದಲ್ಲಿ ಹೊಸ ಐಷಾರಾಮಿ ಎಸ್‌ಯುವಿಯ ವೈಶಿಷ್ಟ್ಯತೆ ಮತ್ತು ಕಾರ್ಯಕ್ಷಮತೆ ಹೇಗಿತ್ತು ಎಂಬುವುದನ್ನು ನಾವು ನಿಮ್ಮದೊಂದಿಗೆ ಹಂಚಿಕೊಂಡಿದ್ದೇವೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀವು ಈ ವೀಡಿಯೊದಲ್ಲಿ ವೀಕ್ಷಿಸಬಹುದಾಗಿದೆ.
#MercedesBenzGLA #Review #GLA200 #MercedesBenz