ಆಸಕ್ತ ಗ್ರಾಹಕರಿಗಾಗಿ ಎನ್ಎಂಡಬ್ಲ್ಯು(NMW) ರೇಸಿಂಗ್ ಕಂಪನಿಯು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಮಾದರಿಗಾಗಿ ವಿಶೇಷವಾದ ರೇಸಿಂಗ್ ಕಿಟ್ ಸಿದ್ದಪಡಿಸಿದೆ. ಮಾಡಿಫೈಗೊಳಿಸಲಾದ ಈ ಹಿಮಾಲಯನ್ ಮಾದರಿಯಲ್ಲಿ ಹಲವಾರು ಆಸಕ್ತಿದಾಯಕವಾದ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಮಾಡಿಫೈ ಸೀರಿಸ್‌ನ ಮೊದಲ ಎಪಿಸೋಡ್‌ನಲ್ಲಿ ನಾವು ನಿಮಗೆ ಪ್ರಾಜೆಕ್ಟ್ ಹೆಚ್‌ಟಿ500 ಬಗೆಗಿ ಮಾಹಿತಿ ತಿಳಿಸಿಕೊಡಲಿದ್ದೇವೆ.
ವಿಶೇಷ ತಾಂತ್ರಾಶದೊಂದಿಗೆ ಮಾಡಿಫೈಗೊಂಡಿವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 500ಸಿಸಿ ಮಾದರಿಯಲ್ಲಿ ಬಿಗ್ ಬೋರ್ ಕಿಟ್, ದೊಡ್ಡದಾದ ವಾಲ್ವ್, ಪೋರ್ಟೆಡ್ ಇಂಜಿನ್ ಹೆಡ್, ಹೈ-ಲಿಫ್ಟ್ ಕ್ಯಾಮ್‌ಶಾಫ್ಟ್ ಮತ್ತು 4-ಮ್ಯಾಪ್ ರೇಸಿಂಗ್ ಇಸಿಯು ಜೋಡಿಸಲಾಗಿದೆ. ಇದು ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುವ ಮೂಲಕ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ಮಾಡಿಫೈ ಹಿಮಾಲಯನ್ ಬೈಕ್ ಬಗೆಗಿನ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ.