ಶ್ರೀಲಂಕಾ ಪ್ರವಾಸಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 20 ಮಂದಿಯ ಬಲಿಷ್ಠ ತಂಡವನ್ನು ಶುಕ್ರವಾರ (ಜೂನ್ 10) ಪ್ರಕಟಿಸಿದೆ. ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರ್‌ಗಳ ಈ ಕ್ರಿಕೆಟ್ ಸರಣಿಗಳಿಗೆ ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.