ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಟನೆಯನ್ನು ಆರಂಭಿಸಿ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ನ್ಯಾಷನಲ್ ಕ್ರಶ್ ಎಂದು ಕರೆಸಿಕೊಂಡಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರು ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಅಭಿಮಾನಿ ಕೇಳಿದ ಈ ಪ್ರಶ್ನೆಗೆ ರಶ್ಮಿಕಾ ಮಂದಣ್ಣ 'ಈ ಸಲ ಕಪ್ ನಮ್ದೆ' ಎಂದು ಹೇಳುವ ಮೂಲಕ ತಮ್ಮ ನೆಚ್ಚಿನ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
Rashmika Mandanna revealed her favorite IPL team