ಫೇಸ್ ಬುಕ್ ಲೈವ್ ಮೂಲಕ 'ಪದ್ಮಾವತ್' ಪುಕ್ಕಟೆ ಪ್ರಸಾರ | FIlmibeat Kannada

Filmibeat Kannada 2018-01-25

Views 1.3K

ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ತಯಾರು ಮಾಡಿರುವ ಸಿನಿಮಾ 'ಪದ್ಮಾವತ್'. ಹಾಕಿರುವ ಬಂಡವಾಳ ವಾಪಸ್ ಬರಬೇಕು ಅಂದ್ರೆ, 'ಪದ್ಮಾವತ್' ಸಿನಿಮಾ ಥಿಯೇಟರ್ ಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬೇಕು. ಆದ್ರೆ, 'ಪದ್ಮಾವತ್' ಚಿತ್ರ ಬಿಡುಗಡೆಗೆ ಹಲವೆಡೆ ಕಂಟಕ ಎದುರಾಗಿದೆ.

ವ್ಯಾಪಕ ವಿರೋಧ ಹಾಗೂ ಪ್ರತಿಭಟನೆಗಳ ನಡುವೆ 'ಪದ್ಮಾವತ್' ಸಿನಿಮಾ ತೆರೆಗೆ ಬಂದಿದೆ. ಈ ನಡುವೆ ಕಿಡಿಗೇಡಿಯೊಬ್ಬ ಫೇಸ್ ಬುಕ್ ಲೈವ್ ಮಾಡುವ ಮೂಲಕ 'ಪದ್ಮಾವತ್' ಚಿತ್ರವನ್ನ ಪುಕ್ಕಟೆಯಾಗಿ ಪ್ರಸಾರ ಮಾಡಿದ್ದಾನೆ.

ಒಂದೋ ಎರಡೋ ದೃಶ್ಯ ಮಾತ್ರ ಅಲ್ಲ, ಇಡೀ 'ಪದ್ಮಾವತ್' ಸಿನಿಮಾ ಫೇಸ್ ಬುಕ್ ಲೈವ್ ಮೂಲಕ ಲೀಕ್ ಆಗಿದೆ. ಚಿತ್ರಮಂದಿರದಲ್ಲಿ ಕೂತು 'ಪದ್ಮಾವತ್' ವೀಕ್ಷಿಸುತ್ತಿದ್ದ ಕಿಡಿಗೇಡಿಯೊಬ್ಬ ಥಿಯೇಟರ್ ನಿಂದಲೇ ಫೇಸ್ ಬುಕ್ ಲೈವ್ ಮಾಡಿ ಸಾವಿರಾರು ಜನರಿಗೆ 'ಪದ್ಮಾವತ್' ಫುಲ್ ಸಿನಿಮಾ ಬಿಟ್ಟಿಯಾಗಿ ತೋರಿಸಿದ್ದಾನೆ .

Deepika Padukone, Ranveer Singh, Shahid Kapoor starrer Sanjay Leela Bhansali directorial 'Padmaavat' full movie streamed live on Facebook.

Share This Video


Download

  
Report form
RELATED VIDEOS