ಬುಧವಾರ ನಡೆದ ಚೆನ್ನೈ ಮತ್ತು ಕೊಲ್ಕತ್ತಾ ನಡುವಿನ ಪಂದ್ಯದಲ್ಲಿ ನರೈನ್ ಮಾಡಿದ 17ನೇ ಓವರ್‌ನಲ್ಲಿ ಮೊಯಿನ್ ಅಲಿ ಔಟ್ ಆದ ಬಳಿಕ ಬಂದ ಧೋನಿ ಬೌಂಡರಿ ಬಾರಿಸಿದ್ದಾರೆ. 17ನೇ ಓವರ್‌ನ ಐದನೇ ಎಸೆತವನ್ನು ಬೌಂಡರಿ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಧೋನಿ ಸುನಿಲ್ ನರೈನ್ ಎಸೆತದಲ್ಲಿ ಚೊಚ್ಚಲ ಬೌಂಡರಿ ಸಿಡಿಸುವುದರ ಮೂಲಕ ತಮ್ಮ ಕೆಟ್ಟ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಧೋನಿ ಬಾರಿಸಿದ ಈ ಬೌಂಡರಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದ್ದು ಪ್ರಶಂಸೆ ಮತ್ತು ಟೀಕೆಗಳೆರಡೂ ವ್ಯಕ್ತವಾಗುತ್ತಿವೆ
Chennai Super Kings skipper MS Dhoni on Monday hit his first-ever boundary off Kolkata Knight Riders spinner Sunil Narine in the Indian Premier League history at the Wankhede Stadium on Wednesday. Notably, Dhoni's 1st boundary against Narine came off a free hit in the 17th over of the match.