ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರತಂಡ ಇಂದು ಸಂಜೆ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಲಿದೆ. ಟೀಸರ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿರುವ ಚಿತ್ರ ಈಗ ಮುಂದಿನ ಅಪ್‌ಡೇಟ್ ನೀಡುತ್ತಿದೆ. ಈ ಕುರಿತು ಉಮಾಪತಿ ಫಿಲಂಸ್ ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಟ್ವೀಟ್ ಮಾಡಿದ್ದು, ಫೆಬ್ರವರಿ 9 ರಂದು ಸಂಜೆ 5.05 ಗಂಟೆಗೆ ಏನು ಆ ಸರ್ಪ್ರೈಸ್ ಎಂದು ಘೋಷಣೆ ಮಾಡಲಿದ್ದಾರೆ. ಸದ್ಯಕ್ಕೆ ಅಪ್‌ಡೇಟ್ ಏನು ಎನ್ನುವುದು ತಿಳಿದಿಲ್ಲ. ಆದರೆ, ಟ್ರೈಲರ್ ಅಥವಾ ಮೊದಲ ಹಾಡು ರಿಲೀಸ್ ಮಾಡಬಹುದಾ ಎಂದು ನಿರೀಕ್ಷಿಸಲಾಗುತ್ತಿದೆ.
Roberrt, Madagaja movie Producer Umapathy srinivas gowda to announce his next movie today february 9th, 2021.