ದೇಶಾದ್ಯಂತವಿರುವ ಹೆದ್ದಾರಿಗಳ ಟೋಲ್ ಮೂಲಕ ಹಾದು ಹೋಗುವ ಎಲ್ಲಾ ವಾಹನಗಳು 2021ರ ಜನವರಿ 1ರಿಂದ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್'ಗಳನ್ನು ಹೊಂದಿರಬೇಕು. ಇನ್ನು ಮುಂದೆ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಲ್ಲಿಸಲಾಗುವುದು.
ಎಲ್ಲಾ ವಹಿವಾಟುಗಳನ್ನು ಫಾಸ್ಟ್‌ಟ್ಯಾಗ್ ಮೂಲಕ ಎಲೆಕ್ಟ್ರಾನಿಕ್ ಆಗಿ ನಡೆಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ನವೆಂಬರ್ ತಿಂಗಳಿನಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು.
ಟೋಲ್ ಸಂಗ್ರಹದ ಜೊತೆಗೆ ಥರ್ಡ್ ಪಾರ್ಟ್ ಇನ್ಸ್ಯೂರೆನ್ಸ್ ಸೇರಿದಂತೆ ವಾಹನಗಳ ಹಲವು ದಾಖಲೆಗಳ ನವೀಕರಣಕ್ಕೂ ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 1989ರ ಪ್ರಕಾರ ಹೊಸ ನಾಲ್ಕು ಚಕ್ರ ವಾಹನಗಳ ನೋಂದಣಿಗೆ ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ.
ಫಾಸ್ಟ್‌ಟ್ಯಾಗ್ ಕಡ್ಡಾಯ ಅಳವಡಿಕೆ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.