State government has issued an order to implement Kannada language as first or second language teaching in all the private institution.
ರಾಜ್ಯದಲ್ಲಿರುವ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇಷ್ಟು ವರ್ಷ ಕೆಲವು ಖಾಸಗಿ ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕನ್ನಡವನ್ನು ಕಲಿಸಲಾಗುತ್ತಿತ್ತು, ಇನ್ನೂ ಕೆಲವು ಶಾಲೆಗಳಲ್ಲಿ ಕನ್ನಡವನ್ನು ಐಚ್ಛಿಕವಾಗಿಟ್ಟಿದ್ದರು.ಆದರೆ ಇದೀಗ ಪ್ರತಿ ಖಾಸಗಿ ಶಾಲೆಯಲ್ಲಿ ಕನ್ನಡ ಕಲಿಕೆ ಕಡ್ಡಾಯ ಎನ್ನುವ ಆದೇಶ ಹೊರಬಿದ್ದಿದೆ. ಕಳೆದ ವರ್ಷವೇ ಈ ಆದೇಶವನ್ನು ಹೊರಡಿಸಿದ್ದರೂ ಬಹುತೇಕ ಖಾಸಗಿ ಶಾಲೆಗಳು ಅನುಸರಿಸಿರಲಿಲ್ಲ.