ಬಜಾಜ್ ಆಟೋ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಅವೆಂಜರ್ 160 ಹಾಗೂ ಅವೆಂಜರ್ 220 ಕ್ರೂಸರ್ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಬಿಎಸ್ 6 ಅಪ್‌ಡೇಟ್‌ನ ನಂತರ ಕಂಪನಿಯು ತನ್ನ ಅವೆಂಜರ್ ಸರಣಿಯ ಬೈಕುಗಳ ಬೆಲೆಯನ್ನು ಮೂರನೇ ಬಾರಿಗೆ ಏರಿಕೆ ಮಾಡಿದೆ.
ಬಜಾಜ್ ಅವೆಂಜರ್ ಸ್ಟ್ರೀಟ್ 160 ಬೈಕಿನ ಬೆಲೆಯನ್ನು ರೂ.5,203ಗಳಷ್ಟು ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಯ ನಂತರ ಅವೆಂಜರ್ ಸ್ಟ್ರೀಟ್ 160 ಬೈಕಿನ ಬೆಲೆ ರೂ.1,01,094ಗಳಾಗಿದೆ.
ಅವೆಂಜರ್ ಕ್ರೂಸರ್ 220 ಬೈಕಿನ ಬೆಲೆಯನ್ನು ರೂ.2,457ಗಳಷ್ಟು ಏರಿಕೆ ಮಾಡಲಾಗಿದೆ. ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1,22,630ಗಳಾಗಿದೆ.