ಕೊರೊನಾವೈರಸ್ ಬಂದ ಎಲ್ಲರ ಜೀವನವೇ ಬದಲಾಗಿದೆ. ಒಂದಿಷ್ಟು ಸಮಯವಿಲ್ಲವೆಂದು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದ ಬದುಕುಗಳಿಗೆ ಕಾಲಿಗೆ ಸರಪಳಿ ತೊಡಿಸಿದಂತಾಗಿದೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ.
ಇನ್ನು ಲಾಕ್‌ಡೌನ್ ಸಡಲಿಕೆಯಾದರೂ ಕೂಡ ಮೊದಲಿನಂತೆ ಓಡಾಡಲು ಸಾಧ್ಯವಿಲ್ಲ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾವೈರಸ್ ಸೋಂಕಿತರ ಸಂಖ್ಯೆಯನ್ನು ನೋಡುವಾಗ ಮನೆಯಲ್ಲಿ ಇರುವುದೇ ಸೇಫ್ ಅನಿಸಿದೆ.
ಮನೆಯೊಳಗೇ ಇರುವುದರಿಂದ ಕೊರೊನಾವೈರಸ್ ಬರದಂತೆ ತಡೆಯಬಹುದು, ದೈಹಿಕ ವ್ಯಾಯಾಮವಿಲ್ಲದೆ ಮನೆಯಲ್ಲಿಯೇ ಕುಳಿತುಕೊಂಡಿರುವುದರಿಂದ ಮೈ ತೂಕ ಹೆಚ್ಚಾಗುತ್ತಿರುವುದರಿಂದ ಇತರ ಆರೋಗ್ಯ ಸಮಸ್ಯೆ ಬರುವ ಸಾಧ್ಯತೆ ಇದೆ.
ಆದ್ದರಿಂದ ಈ ಸಂದರ್ಭದಲ್ಲಿ ನಾವು ಕೊರೊನಾವೈರಸ್‌ನಿಂದ ಪಾರಾಗುವುದರ ಜೊತೆಗೆ ನಮ್ಮ ದೇಹದ ಮೈ ತೂಕ, ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಗಮನ ಕೊಡುವುದು ಅವಶ್ಯಕವಾಗಿದೆ.