ರೆಡ್ ವೈನ್ ಆರೋಗ್ಯಕರ ಗುಣಗಳ ಬಗ್ಗೆ ನೀವೆಲ್ಲಾ ಸಾಕಷ್ಟು ಕೇಳಿರುತ್ತೀರಿ, ರೆಡ್ ವೈನ್ ಕುಡಿದರೆ ಆರೋಗ್ಯಕ್ಕೆ ಒಳ್ಲೆಯದು, ಅದರಲ್ಲೂ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ತ್ವಚೆ ಹೊಳಪು ಹೆಚ್ಚುವುದು ಹೀಗೆ ಇದರ ನಾನಾ ಪ್ರಯೋಜನಗಳ ಬಗ್ಗೆ ಕೇಳಿರುತ್ತೀರಿ. ಆದರೆ ಇವೆಲ್ಲಾ ಮಿತಿಯಲ್ಲಿ ಕುಡಿದರೆ ಮಾತ್ರ ಸಿಗುವುದು ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಇಲ್ಲಿ ನಾವು ರೆಡ್ ವೈನ್‌ನ ಮತ್ತೊಂದು ಅದ್ಭುತ ಪ್ರಯೋಜನದ ಬಗ್ಗೆ ಹೇಳಿದ್ದೇವೆ. ಅದೇನೆಂದರೆ ರೆಡ್ ವೈನ್ ತೂಕ ಇಳಿಕೆಗೆ ತುಂಬಾ ಸಹಕಾರಿ ಎನ್ನುವುದು. ಎಷ್ಟೋ ಜನರಿಗೆ ಮೈ ತೂಕ ಹೆಚ್ಚಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ರೆಡ್ ವೈನ್ ಕುಡಿಯುವುದರಿಂದ ಮೈ ತೂಕ ಕಡಿಮೆಯಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ರೆಡ್‌ವೈನ್ ಮೈ ತೂಕ ಇಳಿಸಲು ಹೇಗೆ ಸಹಕಾರಿ? ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ: