JDS state president Vishwanath said he wanted to resign from his position taking moral responsibility for the party’s failure in the Lok Sabha elections and that he will announce his decision soon.
ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷ ಶಾಸಕ ವಿಶ್ವನಾಥ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಪಕ್ಷದಲ್ಲಿ ತಮಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಹೇಳುವ ಮೂಲಕ ಕಳೆದೆರಡು ದಿನಗಳ ಕೆಳಗಷ್ಟೇ ಆಕ್ರೋಶವನ್ನು ಹೊರಹಾಕಿದ್ದರು. ಈ ಮೊದಲು ಅನಾರೋಗ್ಯ ಕಾರಣಕ್ಕಾಗಿ ವಿಶ್ವನಾಥ್ ಎರಡು ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು.