ಕ್ಷೇತ್ರಗಳಲ್ಲೇ ಸೋಲಿಗೆ ಕಾರಣ ಏನು?
ಮೋದಿ ಅಲೆಯಲ್ಲಿ ಘಟಾನುಘಟಿಗಳು ಮಣ್ಣು ಮುಕ್ಕಿದ್ದಾರೆ. ವಂಶಪಾರಂಪರ್ಯ ರಾಜಕಾರಣದಿಂದ ಮೇಲೇದ್ದು ಬಂದವರು ಕೂಡ ಈಗ ನೆಲ ಕಚ್ಚಿದ್ದಾರೆ. ಅನೇಕ ಕ್ಷೇತ್ರಗಳನ್ನು ವಂಶಪಾರಂಪರ್ಯ ಆಳ್ವಿಕೆಯ ಕೋಟೆಗಳನ್ನಾಗಿ ಮಾಡಿಕೊಂಡಿದ್ದವರು ಈಗ ತಮ್ಮದೇ ಕೋಟೆಯಲ್ಲಿ ಸೋಲು ಕಂಡಿದ್ದಾರೆ. ತಂದೆ-ತಾತನ ನಾಮಬಲ ಕೂಡ ವಂಶಪಾರಂಪರ್ಯ ರಾಜಕಾರಣದ ಕುಡಿಗಳ ನೆರವಿಗೆ ಬಂದೇ ಇಲ್ಲ. ಮೋದಿ ಅಲೆ ಎಲ್ಲವನ್ನೂ ಗುಡಿಸಿ ಹಾಕಿದೆ.