ಜೆಡಿಎಸ್-ಕಾಂಗ್ರೆಸ್ ಸೇರಿ ಸೀಟು ಹಂಚಿಕೊಂಡು, ಸ್ಪರ್ಧೆ ಮಾಡುತ್ತಿರುವುದರಿಂದ ಬಿಜೆಪಿಗೆ ಅನುಕೂಲ ಏನು ಎಂದು ಆವರನ್ನೇ ಪ್ರಶ್ನಿಸಿದರೆ ಒಂದೊಂದೇ ಅಂಶಗಳನ್ನು ತೆರೆದಿಡುತ್ತಾ ಹೋದರು. ಹಾಸನ, ಮಂಡ್ಯದಿಂದ ಜೆಡಿಎಸ್ ಹಿರಿಯ ನಾಯಕರನ್ನು ಕಣಕ್ಕೆ ಇಳಿಸಿದ್ದರೆ ಅದು ಕೂಡ ಸವಾಲಿರುತ್ತಿತ್ತು. ಆದರೆ ಇನ್ನೂ ಸಣ್ಣ ವಯಸ್ಸಿನವರನ್ನು ಅಖಾಡಕ್ಕೆ ಇಳಿಸಿ, ಅಪಾಯ ಮೈ ಮೇಲೆ ಎಳೆದುಕೊಂಡಿದ್ದಾರೆ ಎಂಬುದು ಅವರ ಅಭಿಪ್ರಾಯ.