ನಟಿ ರಮ್ಯಾಗೆ ಕರ್ನಾಟಕದ ಕನೆಕ್ಷನ್ ದಿನೇ ದಿನೇ ಕಡಿಮೆ ಆಗುತ್ತಿದೆ. ರಾಜಕೀಯ ಆಗಿರಬಹುದು, ಸಿನಿಮಾ ಆಗಿರಬಹುದು ರಮ್ಯಾ ಪಾಲಿಗೆ ಕನ್ನಡ ನಾಡು ದೂರ ಆಗುತ್ತಲೇ ಇದೆ. ಮತ್ತೊಂದು ಕಡೆ ರಮ್ಯಾಗೆ ಕನ್ನಡದ ಅಭಿಮಾನ ಕೂಡ ಕಡಿಮೆ ಆಗುತ್ತಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ. 'ಎಲ್ಲದರೂ ಇರು ಎಂತಾದರೂ ಇರು ಎಂದೆದಿಗೂ ನೀ ಕನ್ನಡವಾಗಿರು' ಎಂಬ ಮಾತಿದೆ. ಆದರೆ, ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿಯೇ ಬೆಳೆದ ರಮ್ಯಾ ಮಾತ್ರ ಹತ್ತಿದ ಏಣಿಯನ್ನು ಒದೆಯುವ ಕೆಲಸ ಮಾಡಿದ್ರಾ ಎನ್ನುವ ಭಾವನೆ ಮೂಡುತ್ತದೆ.