ಕರುನಾಡ ಕಲಾದೀಪ, ಕರುನಾಡ ಕಲಾಸಾರ್ವಭೌಮ, ಕರುನಾಡ ಕರ್ಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು (ಫೆಬ್ರವರಿ 16) ಹುಟ್ಟುಹಬ್ಬದ ಸಂಭ್ರಮ. ಸ್ಯಾಂಡಲ್ ವುಡ್ ಚಕ್ರವರ್ತಿ ಅಭಿಮಾನಿಗಳು, ಸ್ನೇಹಿತರು, ಸಿನಿಮಾರಂಗದವರು ಹೀಗೆ ಎಲ್ಲರಿಂದಲೂ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಅಭಿಮಾನಿಗಳ ಆರಾಧ್ಯ ದೈವ ದಾಸ ದರ್ಶನ್ ಮನೆ ಮುಂದೆ ಅಭಿಮಾನಿಗಳ ಜನಸಾಗರ ಸೇರಿದ್ದು, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.