ಡಿಸೆಂಬರ್ 21ರಂದು ಇಡೀ ಕರ್ನಾಟಕದ ಕಣ್ಣು ಕೆಜಿಎಫ್ ಮೇಲೆ ಇರಲಿದೆ. ಯಶ್ ಅಭಿನಯದ ಈ ಸಿನಿಮಾ ಐದು ಭಾಷೆಗಳಲ್ಲಿ ಒಂದೇ ದಿನ ತೆರೆಕಾಣುತ್ತಿದೆ. ಕೆಜಿಎಫ್ ಚಿತ್ರಕ್ಕೆ ಶಾರೂಖ್ ಖಾನ್ ಅಭಿನಯದ 'ಜೀರೋ' ಸಿನಿಮಾ ಎದುರಾಳಿ ಆಗಿರುವುದು ಗೊತ್ತಿರೋ ವಿಚಾರ. ಅಂದ್ರೆ, ಬಾಲಿವುಡ್ ನಲ್ಲಿ ಕೆಜಿಎಫ್ ಗೆ ಜೀರೋ ನೇರಾನೇರ ಫೈಟ್ ನೀಡಲಿದೆ. ಆದ್ರೆ, ಸೌತ್ ಇಂಡಸ್ಟ್ರಿಯಲ್ಲಿ ಕೆಜಿಎಫ್ ಗೆ ಎದುರಾಳಿ ಚಿತ್ರಗಳು ಇಲ್ವಾ ಎಂಬ ಕಲ್ಪನೆ ನಿಮ್ಮಲ್ಲಿ ಇದ್ರೆ ಬಿಟ್ಟುಬಿಡಿ. ಯಾಕಂದ್ರೆ, ಬಾಲಿವುಡ್ ನಲ್ಲಿ ಒಂದು ಸಿನಿಮಾ, ಈ ಕಡೆ ಸೌತ್ ನಲ್ಲಿ ಆರು ಸಿನಿಮಾ ಕೆಜಿಎಫ್ ಎದುರು ಬರ್ತಿದೆ.
Kannada actor yash starrer kgf, shahrukh khan satarrer zero, dhanush satrrer maari 2 movies will releasing on december 21st.