Why cabinet expansion in Karnataka getting delayed? Many Congress leaders who are lobbying for cabinet berth are in touch with BJP. If they don't get inducted into cabinet they may destabilize JDS - Congress govt by joining hands with BJP. This has been communicated to Rahul Gandhi by Kumaraswamy.
ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಲು ಲಾಬಿ ಮಾಡುತ್ತಿರುವವರ ಪೈಕಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ನೀವು ಯೆಸ್ ಎಂದರೆ ಮಂತ್ರಿ ಮಂಡಲ ವಿಸ್ತರಣೆಗೆ ನಾನು ಸಿದ್ದ. ಆದರೆ ಮಂತ್ರಿ ಪದವಿ ಸಿಗದವರು ಒಗ್ಗೂಡಿ ಕಮಲ ಪಾಳೆಯದ ಕಡೆ ಹೋದರೆ, ಆ ಮೂಲಕ ಸರ್ಕಾರ ಉರುಳಿದರೆ ಅದರ ಹೊಣೆ ಹೊರಲು ನೀವು ಸಿದ್ದರಾಗಿರಬೇಕು." ಹಾಗಂತ ಮೊನ್ನೆ ಸಿಎಂ ಕುಮಾರಸ್ವಾಮಿ ಅವರು ನೇರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮೆಸೇಜು ಮುಟ್ಟಿಸಿದ ಮೇಲೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಣ್ಣಗಾಗಿ ಹೋಗಿದೆ.