ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಆರ್‌ಎಸ್ಎಸ್ ಮುಖಂಡರ ಸಭೆ ನಿನ್ನೆ (ನ.14) ತಡರಾತ್ರಿವರೆಗೆ ನಡೆದಿದೆ. ಸಂಜೆ 8 :30ಕ್ಕೆ ಮಂಗಳೂರಿಗೆ ಬಂದಿಳಿದ ಅಮಿತ್ ಶಾ ನೇರವಾಗಿ ಮಂಗಳೂರಿನ ಮಣ್ಣಗುಡ್ಡದಲ್ಲಿರುವ ಸಂಘನಿಕೇತನಕ್ಕೆ ತೆರಳಿದರು. ಆರ್ ಎಸ್ಎಸ್ ನ ದಕ್ಷಿಣದ ಶಕ್ತಿಕೇಂದ್ರ ಸಂಘನಿಕೇತನದಲ್ಲಿ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಪ್ರಚಾರಕ್ ಪ್ರಮುಖರೊಂದಿಗೆ ತಡರಾತ್ರಿ 1 ಗಂಟೆವರೆಗೆ ಸಭೆ ನಡೆದಿದ್ದು, ಸತತ ನಾಲ್ಕು ಗಂಟೆಗಳ ಕಾಲ ಆರ್‌ಎಸ್ಎಸ್ ಮುಖಂಡರ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.
BJP president Amit Shah and the RSS leaders' meeting took place yesterday late night at sanhga nikethan in Mangalore.