ಚಂದನವನದ ತಾರೆಯರ ಸೊಬಗಿನ ನೃತ್ಯ, ನೇಹ ಕಕ್ಕರ್ ಇಂಪಾದ ಗಾಯನಕ್ಕೆ ಯುವ ದಸರೆಯ ಸಂಭ್ರಮ ಮೇರೆ ಮೀರಿತ್ತು. ರಾಕಿಂಗ್ ಸ್ಟಾರ್ ಯಶ್ ಯುವ ದಸರೆಗೆ ರಂಗು ತುಂಬಿದರು. ಮಹಾರಾಜ ಕಾಲೇಜಿನ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಯುವಕ-ಯುವತಿಯರು ಯುವ ದಸರೆಯ ಕೊನೇ ದಿನದಂದು ಬುಧವಾರ (ಅ.17) ನರ್ತಿಸಿದ ಕಲಾವಿದರನ್ನು ಮನಸಾರೆ ಪ್ರೋತ್ಸಾಹಿಸಿದರು.