ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್-2 ನಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಚಿತ್ರದ ನಂತರ ರಾಕಿ ಭಾಯ್ ಹವಾ ಮತ್ತಷ್ಟು ಹೆಚ್ಚಾಗಿ. ಕರ್ನಾಟಕದಲ್ಲಿ ಮಾತ್ರ ಧೂಳ್ ಎಬ್ಬಿಸುತ್ತಿದ್ದ ರಾಕಿ ಕೆಜಿಎಫ್ ನಂತರ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಯಶ್ ಒಂದು ಸಿನಿಮಾ ಮಾಡಬೇಕು ಅಂದ್ರೀಗ ಕನ್ನಡ ನಿರ್ದೇಶಕರು ಮಾತ್ರವಲ್ಲ, ಬೇರೆ ಬೇರೆ ಭಾಷೆಯ ಡೈರೆಕ್ಟರ್ಸ್ ಆಕ್ಷನ್ ಕಟ್ ಹೇಳಲು ಮುಂದೆ ಬರುತ್ತಿದ್ದಾರೆ. ಕೆಜಿಎಫ್ ಚಿತ್ರದ ನಂತರ ಯಶ್ ಸಿನಿಮಾ ಯಾವುದು ಎನ್ನುವುದು ಅಭಿಮಾನಿಗಳಲ್ಲಿ ಕಾಡುತ್ತಿದೆ.
After KGF chapter-2 Rocking star Yash may hero in director Puri Jagannadh Directorial film.