ಕಾರವಾರ, ಜುಲೈ.30: ಬೈಕ್ ಸವಾರರಿಗೆ ಹೆಲ್ಮೆಟ್ ಹೇಗೆ ಜೀವದಾನ ಮಾಡುತ್ತದೆ ಎನ್ನುವುದಕ್ಕೆ ಶನಿವಾರ ನಗರದಲ್ಲಿ ನಡೆದ ಅಪಘಾತವೊಂದು ಸಾಕ್ಷಿಯಾಗಿದೆ. ನಗರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಎದುರು ಶನಿವಾರ ಸಂಜೆ ಎರಡು ಬೈಕ್ ಗಳ ನಡುವೆ ಅಪಘಾತ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ.