ಪರಮಾಪ್ತರಾಗಿದ್ದ ಸಂದೇಶ್ ನಾಗರಾಜ್ ಕುಟುಂಬ ಮತ್ತು ಕುಮಾರಸ್ವಾಮಿ ನಡುವಿನ ಸಂಬಂಧ ಹಾಳಾಗಲು ಮೈಸೂರಿನ ನರಸಿಂಹರಾಜ ಕ್ಷೇತ್ರದ ಟಿಕೆಟ್ ಹಂಚಿಕೆ ವಿಷಯ ಕಾರಣವಾಗಿದೆ. ಚುನಾವಣೆಗೆ ಕೆಲವೇ ದಿನಗಳ ಮುನ್ನ, ಸಂದೇಶ್ ನಾಗರಾಜ್ ಸಹೋದರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನರಸಿಂಹರಾಜ ಕ್ಷೇತ್ರ ತಲೆಮಾರಿನಿಂದ ಕಾಂಗ್ರೆಸ್ ಆಧಿಪತ್ಯದಲ್ಲೇ ಇರುವಂತದ್ದು. ಅಜೀಜ್ ಸೇಠ್, ಅವರ ಬೆಂಬಲಿತ ಅಭ್ಯರ್ಥಿ ಮತ್ತು ಈಗ ಅವರ ಪುತ್ರ ತನ್ವೀರ್ ಸೇಠ್ ಸತತ ನಾಲ್ಕು ಬಾರಿ ಚುನಾವಣೆಯನ್ನು ಗೆದ್ದಿದ್ದಾಗಿದೆ. ಒಂದರ್ಥದಲ್ಲಿ ತನ್ವೀರ್, ಕಾಂಗ್ರೆಸ್ ಪಾಲಿಗೆ ಗೆಲುವಿನ ಕುದುರೆ.