ಮೈಸೂರಿನ ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಇನ್ನೇನು ನಾಮಿನೇಶನ್ ಫೈಲ್ ಮಾಡಲು ಹೋಗಬೇಕು ಎನ್ನುವಷ್ಟರಲ್ಲಿ, ಪಕ್ಷದ ವರಿಷ್ಠರಿಂದ ಬಂದ ಆದೇಶ ಕಾರ್ಯಕರ್ತರ ಉತ್ಸಾಹಕ್ಕೆ ಸಿಡಿಲಿನಂತೆ ಅಪ್ಪಳಿಸಿತ್ತು. ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿ ತೋರಿಸುತ್ತೇನೆಂದು ಶಪಥ ಮಾಡಿದ ಯಡಿಯೂರಪ್ಪನವರ ಮಾತಿನಂತೆ, ಬಿಜೆಪಿ ತೋಟದಪ್ಪ ಬಸವರಾಜ್ ಅವರಿಗೆ ಟಿಕೆಟ್ ನೀಡಿತು. ಆದರೆ, ಕಾರ್ಯಕರ್ತರ ಆಕ್ರೋಶ ಕಮ್ಮಿಯಾಗಿಲ್ಲ.