2013 Karnataka assembly elections poll prediction. Tehelka, C-Voter, Public TV, Todays' Chankya, Suvarna News, C-Fore, CNN-IBN, The Week, Mint has done the survey and most of the pre-poll survey reports came out close to the actual figure.
2013ರ ಚುನಾವಣೆಯಲ್ಲಿ ಬಿಜೆಪಿ ವಿರುದ್ದದ ಆಡಳಿತ ವಿರೋಧಿ ಅಂಶದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಎಲ್ಲಾ ಮಾಧ್ಯಮ ಮತ್ತು ಖಾಸಗಿ ಸಂಸ್ಥೆಗಳು ನೀಡಿದ್ದ ಸಮೀಕ್ಷೆ ಬಹುತೇಕ ಸರಿಯಾಗಿದ್ದವು. ನಂಬರ್ ನಲ್ಲಿ ಅಲ್ವಸ್ವಲ್ಪ ಬದಲಾವಣೆಯಾಗಿದ್ದರೂ, ಕನ್ನಡ ವಾಹಿನಿಗಳೂ ಸೇರಿದಂತೆ ಎಲ್ಲರೂ ಕಾಂಗ್ರೆಸ್ ರಾಜ್ಯವನ್ನಾಳಲಿದೆ ಎನ್ನುವ ವರದಿ ನೀಡಿದ್ದವು. 2013ರ ಅಸೆಂಬ್ಲಿ ಚುನಾವಣೆಯಲ್ಲಿ, ಯಡಿಯೂರಪ್ಪ ಇಲ್ಲದ ಬಿಜೆಪಿಯಾಗಿತ್ತು ಎನ್ನುವುದು ಗಮನಿಸಬೇಕಾದ ಅಂಶ.