ಬಾರ್ ಸಪ್ಲೈಯರ್ ಗಿರೀಶ್ ನ್ನು ಅಪಹರಣ ಮಾಡಿದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು ಶನಿವಾರ ಬಂಧಿಸಲಾಗಿದೆ. ಬಾರ್ ಸಪ್ಲೈರ್ ನ್ನು ಬಂಧಿಸಿ ಚಿತ್ರ ಹಿಂಸೆ ನೀಡಿದಷ್ಟೇ ಅಲ್ಲದೆ ಪಾಯಿಂಟ್ ಬ್ಲಾಂಕ್ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ, ಚಿತ್ರಹಿಂಸೆ ಕೂಡ ಕೊಟ್ಟಿರುವ ಕಾರಣ ಸುನಾಮಿ ಕಿಟ್ಟಿ ಮೇಲೆ ವಿರುದ್ಧ ಗಿರೀಶ್ ದೂರು ದಾಖಲಿಸಿದ್ದರು. ಇದೀಗ ಜ್ಞಾನಭಾರತಿ ಪೊಲೀಸರು ಅಪಹರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಸುನಾಮಿ ಕಿಟ್ಟಿ ಸೇರಿದಂತೆ, ಸ್ನೇಹಿತರಾದ ಯೋಗಂದ್ರ ಮತ್ತು ಅರ್ಜುನ್ ನ್ನು ಬಂಧಿಸಿದ್ದು ಕಿಟ್ಟಿ ಸ್ನೇಹಿತ ಸುನೀಲ್ ನ ಶೋಧವನ್ನು ಮುಂದುವರೆಸಿದ್ದಾರೆ.
Bigg boss reality show famous artist Tsunami kitty has been arrested in Kidnap case by Jnana Bharati police. He was allegedly kidnapped and tortured named Girish, a bar supplier.