'If any one does not want to be in JDS can go out, this party does not only belong to H D Devegowda family. Please try hard to get success in Karnataka assembly elections 2018, forget all misunderstandings' JDS state president and former chief minister of Karnataka H D Kumaraswamy told.
ಜೆಡಿಎಸ್ ಪಕ್ಷದಲ್ಲಿ ಮೊದಲ ಪಟ್ಟಿ ಘೋಷಿಸಿದ ಬೆನ್ನಲ್ಲೇ ಭುಗಿಲೆದ್ದ ಭಿನ್ನಮತ ಹಾಗೂ ಬಂಡಾಯದ ಹೊಗೆಗೆ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್. ಡಿ. ಕೆ. ಯಾರು ಎಲ್ಲಿ ಬೇಕಾದ್ರೂ ಹೋಗಲು ಮುಕ್ತ ಅವಕಾಶವಿದೆ. ಬರೋರು ಬರಬಹುದು, ಹೋಗೋರು ಹೋಗಬಹುದು, ನಾನ್ಯಾರನ್ನು ಹಿಡ್ಕೊಂಡಿಲ್ಲ. ಯಾವುದೇ ರೀತಿಯ ಟಿಕೆಟ್ ಗೊಂದಲವಿಲ್ಲ ಎಂದು ಖಂಡ- ತುಂಡವಾಗಿ ಹೇಳಿದರು.