ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಈಗ ಸ್ನೇಹಿತರಲ್ಲ. ಅವರಿಬ್ಬರು ಒಂದೇ ಸಿನಿಮಾರಂಗದಲ್ಲಿ ಅಭಿನಯಿಸುತ್ತಿರುವ ಕಲಾವಿದರಷ್ಟೆ. ಈ ಮಾತನ್ನ ದರ್ಶನ್ ಅವರೇ ಖಚಿತ ಪಡಿಸಿದ್ದರು. ಇದಾದ ನಂತರ್ ದರ್ಶನ್ ಬಗ್ಗೆ ಸುದೀಪ್ ಅವರಾಗಲಿ, ಸುದೀಪ್ ಬಗ್ಗೆ ದರ್ಶನ್ ಅವರಾಗಲಿ ಎಲ್ಲಿಯೂ ಮಾತನಾಡಿಲ್ಲ.
ಸ್ನೇಹಿತರಾದ ನಂತರ ಸದಾ ಜೊತೆಯಲ್ಲೇ ಓಡಾಡಿಕೊಂಡಿದ್ದ ದರ್ಶನ್ ಮತ್ತು ಕಿಚ್ಚ ಸುದೀಪ್ ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ. ಅಭಿಮಾನಿಗಳು ಕೆಲ ದಿನಗಳು ಈ ಬಗ್ಗೆ ಪ್ರಶ್ನೆ ಮಾಡಿ ನಂತರ ಈ ವಿಚಾರವನ್ನ ಇಲ್ಲಿಗೆ ಬಿಟ್ಟುಬಿಡುವುದು ಸೂಕ್ತ ಎಂದು ನಿರ್ಧರಿಸಿದರು.
ಆದರೆ ಕಿಚ್ಚ ಸುದೀಪ್ ಅವರು ದರ್ಶನ್ ಬಗ್ಗೆ ಮಾತನಾಡಿರುವುದು ಅಭಿಮಾನಿಗಳ ಮನಸ್ಸಿನಲ್ಲಿ ಆಶಾಕಿರಣ ಮೂಡಿಸಿದೆ. ಸುದೀಪ್ ಬಿಗ್ ಬಾಸ್ ವೇದಿಕೆ ಮೇಲೆ ದರ್ಶನ್ ಬಗ್ಗೆ ಪ್ರಶ್ನೆಗಳನ್ನ ಕೇಳಿದ್ದು ಮತ್ತೆ ಇವರಿಬ್ಬರು ಒಂದಾಗಬಹುದಾ ಎನ್ನುವ ಕುತೂಹಲ ಹೆಚ್ಚಿಸಿದೆ. ಹಾಗಾದ್ರೆ ಸುದೀಪ್ ದರ್ಶನ್ ಅವರ ಹೆಸರು ಸ್ಟೇಜ್ ಮೇಲೆ ಹೇಳಿದ್ದು ಏಕೆ?
Actor Sudeep has talked about Challenging star Darshan on the Big Boss finals. Sudeep spoke about Darshan's performance in Prema Bharaha movie.