ಮಹದಾಯಿ ಹೋರಾಟಕ್ಕಾಗಿ ಇಂದು ಕರ್ನಾಟಕ ಬಂದ್ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗ ಕೂಡ ಸಂಪೂರ್ಣವಾಗಿ ಬಂದ್ ಗೆ ಸಾಥ್ ನೀಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕ ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿದೆ. ಜೊತೆಗೆ ಯಾವುದೇ ಸಿನಿಮಾ ಶೂಟಿಂಗ್ ಇಂದು ನಡೆಯುತ್ತಿಲ್ಲ.
ನಿನ್ನೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾದ್ಯಕ್ಷ ಉಮೇಶ್ ಬಣಕಾರ್ ಕರ್ನಾಟಕ ಬಂದ್ ಬಗ್ಗೆ ಮಾತನಾಡಿ ಈ ಬಂದ್ ಗೆ ವಾಣಿಜ್ಯ ಮಂಡಳಿಯ ಬೆಂಬಲ ಇದೆ ಎಂದು ಹೇಳಿದ್ದರು. ಅದೇ ರೀತಿ ನಿರ್ಮಾಪಕರ ವಲಯ ಮತ್ತು ಪ್ರದರ್ಶಕ ವಲಯ ಕೂಡ ವಾಣಿಜ್ಯ ಮಂಡಳಿಯ ನಿರ್ಧಾರವನ್ನು ಪಾಲಿಸಿತ್ತು.
ಇಂದು ಬೆಂಗಳೂರಿನ ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರಗಳಾದ ಸಂತೋಷ್, ನರ್ತಕಿ, ತ್ರಿವೇಣಿ, ಅನುಪಮ, ಭೂಮಿಕಾ, ಅನುಭವ್, ಮೇನಕಾ, ಸ್ವಪ್ನ ಸೇರಿದಂತೆ ಎಲ್ಲ ಚಿತ್ರಗಳು ಖಾಲಿ ಖಾಲಿ ಆಗಿದೆ.
Kannada film industry supports Karnataka bandh. No movie shows and shooting Today. (January 26).