20 ವರ್ಷದ ಹಿಂದಿನ 'ಎ' ಚಿತ್ರವನ್ನ ಉಪೇಂದ್ರ ಮತ್ತೆ ಮಾಡಿದ್ರೆ? | Filmibeat Kannada

Filmibeat Kannada 2018-01-23

Views 803

'ತರ್ಲೆ ನನ್ ಮಗ', 'ಶ್', 'ಸ್ವಸ್ತಿಕ್', 'ಆಪರೇಷನ್ ಅಂತ', ಹಾಗೂ 'ಓಂ' ಚಿತ್ರಗಳನ್ನ ನಿರ್ದೇಶನ ಮಾಡಿ ಕನ್ನಡದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿದ್ದ ಡೈರೆಕ್ಟರ್ ಉಪೇಂದ್ರ.

ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಾ, ಅಭಿನಯದಲ್ಲೂ ಕಮಾಲ್ ಮಾಡಲು ತಯಾರಾಗುತ್ತಿದ್ದ ಉಪ್ಪಿ, 1998 ರಲ್ಲಿ ದೃಢ ನಿರ್ಧಾರ ಮಾಡಿಯೇಬಿಟ್ಟರು. ತಾನೇ ನಿರ್ದೇಶನ ಮಾಡಿದ 'ಎ' ಚಿತ್ರಕ್ಕೆ ತಾನೇ ನಾಯಕನಾಗಿ ಪ್ರಮೋಷನ್ ಪಡೆದುಕೊಂಡರು.

ಅಲ್ಲಿಂದ, ಉಪೇಂದ್ರ ಮತ್ತೆ ಹಿಂತಿರುಗಲೇ ಇಲ್ಲ. ಡೈರೆಕ್ಷನ್ ಕಮ್ಮಿ ಮಾಡಿ ನಟನೆ ಜಾಸ್ತಿ ಮಾಡಿದ್ರು. ಸಾಲು ಸಾಲು ಸಿನಿಮಾ ಮಾಡಿ ಸೂಪರ್ ಸ್ಟಾರ್ ಪಟ್ಟಕ್ಕೇರಿದರು. ಉಪ್ಪಿ ಎಷ್ಟೇ ಸೂಪರ್ ಸ್ಟಾರ್ ಆದ್ರು, 'ಎ' ಚಿತ್ರವನ್ನ ಮಾತ್ರ ಯಾರೂ ಮರೆಯಲ್ಲ. ಉಪ್ಪಿ ಮತ್ತೆ 'ಎ' ರೀತಿಯ ಸಿನಿಮಾಗಳನ್ನ ಮಾಡಲಿ ಎನ್ನುವುದು ಅಭಿಮಾನಿಗಳ ಬೇಡಿಕೆ. 20 ವರ್ಷದ ಹಿಂದಿನ 'ಎ' ಚಿತ್ರವನ್ನ ಉಪೇಂದ್ರ ಮತ್ತೆ ಮಾಡಿದ್ರೆ.?

Upendra has been totally concentrating on politics but what if he make the cult movie 'A' again ?

Share This Video


Download

  
Report form
RELATED VIDEOS