ಮದುವೆಯ ಸಂಭ್ರಮದಲ್ಲಿ ನಟಿ ಜಾಕಿ ಭಾವನಾ | Filmibeat Kannada

Filmibeat Kannada 2018-01-22

Views 1.7K

ಕಳೆದ ವರ್ಷ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಭಾವನಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕ ಮೂಲದ ನಿರ್ಮಾಪಕ ನವೀನ್ ಕುಮಾರ್ ಅವರ ಜೊತೆ ಭಾವನಾ ಸಪ್ತಪದಿ ತುಳಿದಿದ್ದಾರೆ. ಹಿಂದೂ ಸಂಪ್ರದಾಯದಂತೆ ಇಂದು(ಜ:22) ಮದುವೆ ಶಾಸ್ತ್ರಗಳು ಜರುಗಿವೆ.

ಕೇರಳದ ತ್ರಿಶೂರ್ ನಲ್ಲಿರುವ ತಿರುವಂಬಾಡಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಮದುವೆಯ ಮಹೂರ್ತ ಸಮಾರಂಭ ನಡೆದಿದೆ. ಭಾವನಾ ಅವರ ಸಂಬಂಧಿಕರು ಹಾಗೂ ನವೀನ್ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

ಮದುವೆ ಮುಂಚೆ ಭಾವನಾ ಅವರ ಮೆಹೆಂದಿ ಸಮಾರಂಭ ಅದ್ದೂರಿಯಾಗಿ ನಡೆದಿದ್ದು ಕಾರ್ಯಕ್ರಮದ ವಿಡಿಯೋ ಸಖತ್ ವೈರಲ್ ಆಗಿದೆ. ಭಾವನಾ ಜೊತೆ ಮಲೆಯಾಳಂನ ಅನೇಕ ನಟಿಯರು ಮಧುವಿನ ಜೊತೆ ಹೆಜ್ಜೆ ಹಾಕಿದ್ದಾರೆ. ಮೆಹೆಂದಿ ಸಂಭ್ರಮ ಹೇಗಿತ್ತು? ಸಂಪೂರ್ಣ ಮಾಹಿತಿ ಇಲ್ಲಿದೆ.

Last year bhavana got the karnataka origin producer Naveen . Today they got married in Kerala and the mehandi video of the actress is going viral

Share This Video


Download

  
Report form
RELATED VIDEOS