ದುನಿಯಾ ವಿಜಯ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ | Filmibeat Kannada

Filmibeat Kannada 2018-01-20

Views 1

ಕನ್ನಡದ ಕರಿಚಿರತೆ, ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಇಂದು 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆ ತಡರಾತ್ರಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಗಿರಿನಗರದಲ್ಲಿರುವ ವಿಜಿ ನಿವಾಸಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ವಿಜಿ ಹುಟ್ಟುಹಬ್ಬದ ವಿಶೇಷವಾಗಿ ಹೊಸ ಚಿತ್ರಗಳು ಅಭಿಮಾನಿಗಳಿಗೆ ವಿಶೇಷವಾದ ಉಡುಗೊರೆಯನ್ನ ನೀಡಿದೆ. ದುನಿಯಾ ವಿಜಯ್ ಅಭಿನಯಿಸಿರುವ 'ಕನಕ', 'ಜಾನಿ ಜಾನಿ ಎಸ್ ಪಪ್ಪಾ' ಹಾಗು 'ಕುಸ್ತಿ' ಚಿತ್ರಗಳು ಸರ್ಪ್ರೈಸ್ ಗಿಫ್ಟ್ ನೀಡಿದೆ.

ದುನಿಯಾ ವಿಜಯ್ ಜೊತೆ ಕುಸ್ತಿ ಅಖಾಡಕ್ಕೀಳಿದ ಮಗ 'ಸಮ್ರಾಟ್' ಸಣ್ಣಪುಟ್ಟ ಪಾತ್ರಗಳನ್ನ ನಿರ್ವಹಿಸುತ್ತಿದ್ದ ವಿಜಿ, 'ದುನಿಯಾ' ಸಿನಿಮಾ ಮೂಲಕ ನಾಯಕನಟನಾದರು. ಅಲ್ಲಿಂದ ನಡೆದಿದ್ದೆಲ್ಲ ಇತಿಹಾಸ. 'ಯುಗ', 'ಗೆಳೆಯ', 'ಚಂಡ', 'ಅವ್ವ', 'ಸ್ಲಂ ಬಾಲ', 'ಜಂಗ್ಲಿ', 'ತಾಕತ್', 'ಶಂಕರ್‌ ಐಪಿಎಸ್', 'ಕರಿಚಿರತೆ', 'ಮಾಸ್ತಿಗುಡಿ' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ ಸೂಪರ್ ಸ್ಟಾರ್ ಆದ್ರು. ಸದ್ಯ, ಹೊಸ ಚಿತ್ರಗಳಿಂದ ಸಿಕ್ಕ ಉಡುಗೊರೆ ಏನು?
Actor Duniya Vijay is celebrating his 44th birthday today and his new movie teams have given his birthday gift to his fans .

Share This Video


Download

  
Report form
RELATED VIDEOS