JK aka Jayaram Karthik has become popular through Ashwini Nakshatra Serial & now he is a contestant in Bigg Boss Kannada Season 5. JK is now 38 years old & still unmarried. There is a sad story behind JK. Watch Video.
'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮದಲ್ಲಿ 'ಬಿಗ್' ಮನೆ ಸೇರಿರುವ ಹ್ಯಾಂಡ್ ಸಮ್ ಸ್ಪರ್ಧಿ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಂ. 'ಅಶ್ವಿನಿ ನಕ್ಷತ್ರ' ಖ್ಯಾತಿಯ ಜೆ.ಕೆ, ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮಿಂಚಿದ್ದಾರೆ.ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ನ ದೊಡ್ಡ ಧಾರಾವಾಹಿಯಲ್ಲಿ 'ರಾವಣ'ನ ಪಾತ್ರ ನಿರ್ವಹಿಸುವ ಮೂಲಕ ದೊಡ್ಡ ಯಶಸ್ಸು ಗಳಿಸಿಕೊಂಡಿರುವ ಖ್ಯಾತಿ ಅವರದ್ದು.ಆದ್ರೆ, 'ಜೆ.ಕೆ'ಯ ಈ ಯಶಸ್ಸಿನ ಜರ್ನಿ ಹೂವಿನ ಹಾಸಿಗೆಯಾಗಿರಲಿಲ್ಲ. ಮುಳ್ಳಿನ ಹಾದಿಯಾಗಿತ್ತು. ಹಾಗಿದ್ದರೆ, ಬಿಗ್ ಬಾಸ್ ಮನೆ ಸೇರಿದ 'ಜೆ.ಕೆ'ಯ ರೋಚಕ ಬದುಕು ಹೇಗಿತ್ತು . ಕಿರುತೆರೆ ಸೂಪರ್ ಸ್ಟಾರ್ ಕಾರ್ತಿಕ್ ಜಯರಾಂ ಅವರು ವೃತ್ತಿಯಲ್ಲಿ ಇಂಜಿನಿಯರ್ (Structural engineer). ಆದ್ರೆ, ಸಿನಿಮಾದ ಮೇಲಿನ ಆಸಕ್ತಿಯಿಂದ ಚಿತ್ರರಂಗದಲ್ಲಿ ಏನಾದರೂ ಸಾಧಿಸಿಬೇಕು ಎಂಬ ಛಲದಿಂದ ಚಿತ್ರರಂಗಕ್ಕೆ ಕಾಲಿಟ್ಟರು.ಇನ್ನು ಜೆ ಕೆಗೆ 38 ವರ್ಷ. ಆದರೂ ಇನ್ನು ಮದುವೆಯಾಗಿಲ್ಲ. ಇದರ ಹಿಂದಿದೆ ನೋವಿನ ಕಥೆ. ಈ ವಿಡಿಯೋ ನೋಡಿ.