ಬಿಸಿಸಿಐನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ 17 ಮಂದಿಯ ಟೀಂ ಇಂಡಿಯಾ ಪ್ರಕಟ | Oneindia Kannada

Oneindia Kannada 2017-12-24

Views 951

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಶನಿವಾರ ಸಂಜೆ ಪ್ರಕಟಿಸಲಾಗಿದೆ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ ಮುಂಬೈನಲ್ಲಿ ಸಭೆ ಸೇರಿ ತಂಡವನ್ನು ಆಯ್ಕೆ ಮಾಡಿದೆ. ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಪ್ರಕಟಿಸಿದಂತೆ ವಿರಾಟ್ ಕೊಹ್ಲಿ ತಂಡಕ್ಕೆ ನಾಯಕರಾಗಿದ್ದು, ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲದೆ ಮೂರು ಟೆಸ್ಟ್ ಹಾಗೂ ಟಿ20ಐ ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ.ಡಿಸೆಂಬರ್ 27ರಂದು ಟೀಂ ಇಂಡಿಯಾ ವಿಮಾನವೇರಲಿದೆ. ಡಿಸೆಂಬರ್ 30ರಂದು ಮೊದಲ ಅಭ್ಯಾಸ ಪಂದ್ಯವಾಡಲಿದೆ. ನಾಲ್ಕು ತಿಂಗಳ ಬಳಿಕ ತಂಡಕ್ಕೆ ವೇಗಿ ಮೊಹಮ್ಮದ್ ಶಮಿ ಮರಳಿದ್ದಾರೆ. ಜತೆಗೆ ಮುಂಬೈನ ಯುವ ವೇಗಿ ಶಾರ್ದೂಲ್ ಠಾಕೂರ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೇದಾರ್ ಜಾಧವ್ ಅವರು ತಂಡ ಸೇರಿದ್ದಾರೆ.

ODI Team Indian squad for south African tour was announced by BCCI this Saturday and Kohli is back into limited over game after his wedding.

Share This Video


Download

  
Report form
RELATED VIDEOS