ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವನ್ನು BCCI ಡಿಸೆಂಬರ್ 04 ಸಂಜೆ ಪ್ರಕಟಿಸಲಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ಭಾರತ 3 ಟೆಸ್ಟ್, 6 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿವೆ. ಡಿಸೆಂಬರ್ 24ರಂದು ಶ್ರೀಲಂಕಾ ವಿರುದ್ಧದ ಸರಣಿ ಮುಗಿಯಲಿದೆ. ಡಿಸೆಂಬರ್ 27ರಂದು ಟೀಂ ಇಂಡಿಯಾ ವಿಮಾನವೇರಲಿದೆ. ಡಿಸೆಂಬರ್ 30ರಂದು ಮೊದಲ ಅಭ್ಯಾಸ ಪಂದ್ಯವಾಡಲಿದೆ. ಜನವರಿ5ರಿಂದ ಕೇಪ್ ಟೌನ್ ನಲ್ಲಿ ಪ್ರಾರಂಭವಾಗುವ ಮೂರು ಟೆಸ್ಟ್ ಪಂದ್ಯಗಳ ಸರಣಿ ಫೆಬ್ರವರಿ 24ಕ್ಕೆ ಮುಕ್ತಾಯವಾಗಲಿದೆ. 3 ಟೆಸ್ಟ್ ಪಂದ್ಯಗಳಿಗೆ ತಂಡ ಪ್ರಕಟಿಸಲಾಗಿದ್ದು, ತಂಡ ಇಂತಿದೆ:ವಿರಾಟ್ ಕೊಹ್ಲಿ, ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ , ರೋಹಿತ್ ಶರ್ಮ, ವೃದ್ಧಿಮಾನ್ ಸಹಾ , ಆರ್ ಅಶ್ವಿನ್, ರವೀಂದ್ರ ಜಡೇಜ, ಪಾರ್ಥೀವ್ ಪಟೇಲ್, ಹಾರ್ದಿಕ್ ಪಾಂಡ್ಯಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಜಸ್ ಪ್ರೀತ್ ಬೂಮ್ರಾ.
Team announced for test series, India tour of South Africa and There are no major changes.