ನಾಗಿಣಿ ಧಾರಾವಾಹಿಯ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ ಮಾಡಿದವರು ಅರೆಸ್ಟ್ | Filmibeat Kannada

Filmibeat Kannada 2017-12-22

Views 5

Manjunath, Srikanth and Pavan has been arrested by Vijayanagara police based on the complaint filed by Zee Kannada channel's Nagini serial actor Deekshith Shetty. They have been accused for attacking Deekshith in Vijayanagara, Bengaluru on December 7th.


'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಾಗಿಣಿ' ಧಾರಾವಾಹಿಯ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ ಆಗಿತ್ತು. ಡಿಸೆಂಬರ್ 7 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಈಗ ವಿಜಯ ನಗರ ಪೊಲೀಸರು ಬಂಧಿಸಿದ್ದಾರೆ. ಮೂವರು ಆರೋಪಿಗಳಾದ ಶ್ರೀಕಾಂತ್, ಪವನ್ ಮತ್ತು ಮಂಜುನಾಥ್ ಡಿಸೆಂಬರ್ 7 ರಾತ್ರಿ ನಟ ದೀಕ್ಷಿತ್ ಮೇಲೆ ಹಲ್ಲೆ ಮಾಡಿದ್ದರು. ಪಲ್ಸರ್​ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೊದಲು ದೀಕ್ಷಿತ್ ಬಳಿ ಸೆಲ್ಫಿ ಕೇಳಿದ್ದಾರೆ. ಅದನ್ನು ನಿರಾಕರಿಸಿದಕ್ಕೆ ಏಕಾಏಕಿ ಮೂವರು ದೀಕ್ಷಿತ್ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್​ ಪುಡಿ ಪುಡಿ ಮಾಡಿದ್ದರು. ಜೊತೆಗೆ ದೀಕ್ಷಿತ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು. ಆದರೆ ಈಗ ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಮೂರು ಜನ ಆರೋಪಿಗಳನ್ನು ಬಂದಿಸಿದ್ದಾರೆ.

Share This Video


Download

  
Report form
RELATED VIDEOS