'ಹರ ಹರ ಮಹಾದೇವ' ಧಾರಾವಾಹಿಯ 'ಪಾರ್ವತಿ'ಯನ್ನ ಕಿಕ್ ಔಟ್ ಮಾಡಿದ ಸ್ಟಾರ್ ಸುವರ್ಣ ! 'ಹರ ಹರ ಮಹಾದೇವ' ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಪ್ರತಿ ನಿತ್ಯ ಪ್ರಸಾರವಾಗುವ ಧಾರಾವಾಹಿ. ಶಿವನ ಜೀವನ ಚರಿತ್ರೆಯನ್ನ ಸಾರುವ 'ಹರ ಹರ ಮಹಾದೇವ' ಸಾಕಷ್ಟು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮೇಕಿಂಗ್ ವಿಚಾರವಾಗಿ ಹಾಗೂ ಕಲಾವಿದರ ಅಭಿನಯದಿಂದ ಜನಮೆಚ್ಚುಗೆ ಗಳಿಸಿರುವ 'ಹರ ಹರ ಮಹಾದೇವ' ಧಾರಾವಾಹಿಯಿಂದ ಪಾರ್ವತಿ ಪಾತ್ರಧಾರಿಯನ್ನ ತೆಗೆದು ಹಾಕಲಾಗಿದೆ. 'ಹರ ಹರ ಮಹಾದೇವ'.... ಪೌರಾಣಿಕ ಹಿನ್ನಲೆ ಇರುವ ಧಾರಾವಾಹಿ ಆದ್ದರಿಂದ, ಪಾತ್ರಧಾರಿಗಳನ್ನ ಆಯ್ಕೆ ಮಾಡೋದ್ರ ಜೊತೆಗೆ ಅವ್ರನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಸಿತ್ತು 'ಸ್ಟಾರ್ ಸುವರ್ಣ' ವಾಹಿನಿ. ಆದ್ರೆ, ಕೊಟ್ಟ ಪಾತ್ರವನ್ನ ಸರಿಯಾಗಿ ನಿರ್ವಹಿಸದ ಕಾರಣ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಪ್ರಿಯಾಂಕರಿಗೆ ಗೇಟ್ ಪಾಸ್ ನೀಡಲಾಗಿದೆ.