ಅನುಷ್ಕಾ ಶರ್ಮಾ ಹಾಗು ವಿರಾಟ್ ಕೊಹ್ಲಿ ಯವರು ಇಟಲಿಯಲ್ಲಿ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ . ನಿನ್ನೆ ದೆಹಲಿಯಲ್ಲಿ ಆರತಕ್ಷತೆಯನ್ನು ಈ ದಂಪತಿಗಳು ಏರ್ಪಡಿಸಿದ್ದರು . ಹಾಗು ಈ ಆರತಕ್ಷತಾ ಸಮಾರಂಭಕ್ಕೆ ದೇಶದ ಗಣ್ಯಾತಿ ಗಣ್ಯರನ್ನು ಆಹ್ವಾನಿಸಲಾಗಿತ್ತು . ಸಮಾರಂಭ ಬಹಳ ಮನೋರಂಜನೆ ಇಂದ ತುಂಬಿದ್ದು ಅಲ್ಲಿಗೆ ಬಂದಿದ್ದಂತಹ ವಿ ಐ ಪಿ ಗಳೆಲ್ಲ ಬಹಳ ಎಂಜಾಯ್ ಮಾಡಿದರು . ಸಮಾರಂಭದ ಮುಖ್ಯ ಆಕರ್ಷಣೆ ಎಂದರೆ ಪಂಜಾಬಿ ಗಾಯಕರಾದ ಗುರ್ದಾಸ್ ಮನ್ ಅವರ ಹಾಡುಗಳ . ಕೊಹ್ಲಿಯವರ ಪ್ರಿಯವಾದ ಗಾಯಕರಾಗಿರೋ ಗುರ್ದಾಸ್ ಮನ್ ಅವರ ಹಾಡಿಗೆ ನವ ದಂಪತಿಗಳು ಬಹಳ ಖುಷಿ ಇಂದ ಹೆಜ್ಜೆ ಹಾಕಿದ್ದಾರೆ . ಅನುಷ್ಕಾ ಹಾಗು ಕೊಹ್ಲಿ ನೃತ್ಯ ಮಾಡಿರುವ ವಿಡಿಯೋ ಈಗ ಇಂಟರ್ನೆಟ್ ನಲ್ಲಿ ಬಹಳ ವೈರಲ್ ಆಗಿದೆ .
Virat and Anushka just had a reception ceremony in Delhi and the highlight of the show was when the newly wed danced for Punjabi number sung by Gurdas Mann