ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ತಮ್ಮ ಮುದ್ದಾದ ನಡುವಳಿಕೆಯಿಂದ ಸಾಕಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಡಬ್ ಸ್ಮ್ಯಾಶ್ ಮೂಲಕ ಖ್ಯಾತಿಗಳಿಸಿಕೊಂಡಿದ್ದ ನಿವೇದಿತಾ, ಬಿಗ್ ಮನೆಯಲ್ಲಿ ಹಾಡು ಹೇಳುವುದು, ಡ್ಯಾನ್ಸ್ ಮಾಡುವುದು ಎಲ್ಲರಿಂದಲೂ ಗಮನ ಸೆಳೆದಿದ್ದರು. ಆದ್ರೀಗ, ನಿವೇದಿಗಾ ಗೌಡ ಅವರ ವಿಡಿಯೋವೊಂದು ವೈರಲ್ ಆಗಿದೆ. ಸೂಪರ್ ಹಿಟ್ ಐಟಂ ಹಾಡಿಗೆ ನಿವೇದಿತಾ ಗೌಡ ಹೆಜ್ಜೆ ಹಾಕಿರುವ ವಿಡಿಯೋ ಫೇಸ್ ಬುಕ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.