ತಾವರೆಕೆರೆ ಬಳಿ ಮಾಗಡಿ ರಸ್ತೆಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ | Oneindia Kannada

Oneindia Kannada 2017-12-16

Views 3

Accident caught on cam. 3 women were killed and two others were injured in a serial accident involving a tipper truck, an auto rickshaw and a Alto car in Honaganahatti village, Magadi Road, near Tavarekere on Friday.


ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಭಯಾನಕ ಘಟನೆಯೊಂದು ನಡೆದಿದೆ. ತಾವರೆಕೆರೆಯ ಬಳಿ ಮಾಗಡಿ ರಸ್ತೆಯ ಹೊನಗಾನಹಟ್ಟಿ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.ವೇಗವಾಗಿ ಬಂದ ಟ್ರಕ್ ಒಂದು ನಿಯಂತ್ರಣ ಕಳೆದುಕೊಂಡು ಮೊದಲು ಆಲ್ಟೊ ಕಾರ್ ಗೆ ಹೊಡೆದು ನಂತರ ಆಟೋ ಮೇಲೆ ಹರಿದಿದೆ. ಇದರ ಪರಿಣಾಮ ಸ್ಥಳದಲ್ಲೇ 3 ಮಹಿಳೆಯರು ಸಾವನ್ನಪ್ಪಿದ್ದಾರೆ. ಆಟೋ ಪೂರ್ತಿ ಜಖಂ ಆಗಿದೆ. ಘಟನೆಗೆ ಕರಣ ಇನ್ನು ತಿಳಿದುಬಂದಿಲ್ಲ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದ ಮೇಲೆ ನಿಖರವಾದ ಕಾರಣ ತಿಳಿಯಲಿದೆ. ಆ ಟ್ರಕ್ ಡ್ರೈವರ್ ಕುಡಿದ ಮತ್ತಿನಲ್ಲಿ ಹೀಗೆ ಮಾಡಿದನೋ ಅಥವಾ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿತೋ ಗೊತ್ತಿಲ್ಲ. ಆದರೆ ಅನ್ಯಾಯವಾಗಿ 3 ಅಮಾಯಕ ಜೀವಗಳು ಬಲಿಯಾದವು. ಈ ಘಟನೆಯ ಬಗ್ಗೆ ಹೆಚ್ಚು ತಿಳಿಯಲು ಈ ವಿಡಿಯೋ ನೋಡಿ

Share This Video


Download

  
Report form
RELATED VIDEOS