ರವಿ ಬೆಳಗೆರೆಯವರ ಗ್ರಹಚಾರ ಯಾಕೋ ಸರಿ ಇದ್ದಂತಿಲ್ಲ . ಏಳು ವರ್ಷಗಳ ಹಿಂದೆ ಮಾಡಿದ ತಪ್ಪುಗಳೆಲ್ಲ ಈಗ ಬೆಳಕಿಗೆ ಬರುತ್ತಿವೆ . ಸುಪಾರಿ ಕೇಸ್ ನಲ್ಲಿ ಸಿಕ್ಕುಹಾಕಿ ಕೊಂಡಿದ್ದ ರವಿ ಬೆಳಗೆರೆ ಈಗ ಮತ್ತೊಂದು ಕೇಸ್ ಈಗ ಬಯಲಾಗಿದೆ . ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸುಪಾರಿ ಕೇಸಿನಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ. 7 ವರ್ಷಗಳ ಹಿಂದೆ ದಾಖಲಾಗಿದ್ದ ಮಾನಹಾನಿ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನಿಂದ ರವಿ ಬೆಳಗೆರೆ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದೆ.ಏಳು ವರ್ಷಗಳಿಂದ ವಿಚಾರಣೆಗಾಗಿ ಕೋರ್ಟ್ ಮೆಟ್ಟಿಲೇರದ ಕಾರಣ, ರವಿ ಬೆಳಗೆರೆ ಅವರನ್ನು ಕೋರ್ಟಿಗೆ ಹಾಜರುಪಡಿಸುವಂತೆ ನಿರ್ದೇಶಿಸಲಾಗಿದೆ. ರವಿ ಅವರನ್ನು ವಶಕ್ಕೆ ಪಡೆದು, ಹಾಜರುಪಡಿಸುವಂತೆ ಸಂಜಯನಗರ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.
journalist Ravi Belagere soon after his temporary relief has caught up with some 7 year old case of his .