ರವಿ ಬೆಳಗೆರೆ ಅವರ ಎರಡನೇ ಪತ್ನಿ ರಾಜರಾಜೇಶ್ವರಿ ನಗರ ಸಮೀಪದ ಪಟ್ಟಣಗೆರೆಯ ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದಾರೆ.ರವಿ ಬೆಳಗೆರೆ ಅವರು ತಮ್ಮ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಲು ಪ್ರಮುಖ ಕಾರಣ ರವಿಬೆಳಗೆರೆ ಅವರ ಎರಡನೇ ಪತ್ನಿಯೇ ಎಂಬ ಊಹಾಪೋಹ ನಿನ್ನೆಯಿಂದಲೂ ಚಾಲ್ತಿಯಲ್ಲಿತ್ತು. ಸುನಿಲ್ ಹೆಗ್ಗರವಳ್ಳಿ ಅವರೊಂದಿಗೆ ರವಿ ಬೆಳಗೆರೆ ಎರಡನೇ ಪತ್ನಿ ಅವರಿಗೆ ಸಂಬಂಧವಿತ್ತು ಹಾಗಾಗಿಯೇ ಬೆಳಗೆರೆ ಸುನಿಲ್ ಅವರ ಹತ್ಯೆಗೆ ಸುಪಾರಿ ನೀಡಿದ್ದರು ಎಂಬ ಮಾತುಗಳು ಓಡಾಡುತ್ತಿದ್ದವು. ಈ ಅನುಮಾನಗಳಿಗೆ ರವಿ ಬೆಳೆಗೆರೆ ಕೆಲವು ತಿಂಗಳುಗಳ ಹಿಂದೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಬರಹಗಳು ಪೂರಕವಾಗಿ ನಿಂತಿದ್ದವು. ಈಗ ಅವರು ನಾಪತ್ತೆಯಾಗುವ ಮೂಲಕ ಅನುಮಾನಗಳು ಇನ್ನೂ ದಟ್ಟವಾದಂತಾಗಿದೆ. ಈ ಪ್ರಕರಣದಲ್ಲಿ ರವಿ ಬೆಳಗೆರೆ ಅವರ ಎರಡನೇ ಪತ್ನಿ ಅವರ ಹೇಳಿಕೆ ಅತ್ಯಂತ ಪ್ರಮುಖವಾಗಿದ್ದು, ಸಿಸಿಬಿ ಪೊಲೀಸರು ಅವರನ್ನು ಪತ್ತೆ ಹಚ್ಚುವ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭಿಸಲಿದ್ದಾರೆ.
Ravi Belegere's second wife , soon after his arrest is found to be missing and police are yet to find her for further enquiry